ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ   ವೆಬ್ ಸೈಟ್ : rcmysore-portal.kar.nic.in

ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ಸುಸ್ವಾಗತ

ಹಿಂದೆ ಒಮ್ಮೆ ವಿಷ್ಣು ಭಕ್ತನಾದಂಥ ನಾರದ ಮಹಾ ಮುನಿಯು ಸತ್ಯ ಲೋಕಕ್ಕೆ ಹೋಗಿ ಧರ್ಮಾತ್ಮನೂ ಭಗವಾನನೂ ಆದ ಚತುರ್ಮುಖ ಬ್ರಹ್ಮನಿಂದ ಸಕಲ ಶಾಸ್ತ್ರಗಳನ್ನು ಪುರಾಣಗಳನ್ನು ಕೇಳಿ ಕೃತಾರ್ಥನಾಗಿ ಕೊನೆಯಲ್ಲಿ ಹೇ ಮಹಾತ್ಮಾ! ಕಾವೇರಿ ತೀರದಲ್ಲಿ ವಿಷ್ಣುವಿನ ಒಂದು ಪುಣ್ಯ ಕ್ಷೇತ್ರವನ್ನು ತಿಳಿಸಬೇಕೆಂದು ಪ್ರಾರ್ಥಿಸಲಾಗಿ ಬ್ರಹ್ಮದೇವರು ತಾವು ಕೇಳಿದ ಪ್ರಶ್ನೆಯು ಲೋಕೋಪಕಾರವಾದುದ್ಧರಿಂದ ಶ್ರೀಮನ್ನಾರಾಯಣನ ಪಾದಾರವಿಂದವನ್ನು ಭಕ್ತರು ಸೇವಿಸುವಂತಹ ಅದೃಷ್ಟವು ಲಭಿಸುವಂತಃ ಶ್ರೀ ತಿರುನಾರಾಯಣಪುರ ಎಂಬ ದಿವ್ಯಕ್ಷೇತ್ರದ ಮಹತ್ವವನ್ನು ನಾರದ ಮಹಾಮುನುಗೆ ವಿವರಿಸಿದ ಕ್ಷೇತ್ರವೇ ಯಾದವಗಿರಿ ಮೇಲುಕೋಟೆ ಕ್ಷೇತ್ರ. ಈ ದೇವಾಲಯದಲ್ಲಿ ವಿಶಿಷ್ಟಾದ್ವೈತ ಸಿದ್ದಾಂತದ ಪ್ರಕಾರ ಶ್ರೀ ಪಾಂಚರಾತ್ರಾಗಮ ಈಶ್ವರ ಸಂಹಿತೆಯ ರೀತಿ ನಿತ್ಯ ಮತ್ತು ವಿಶೇಷ ಪೂಜಾದಿಗಳು ಶ್ರೀ ವೈಷ್ಣವ ಸಂಪ್ರದಾಯದೊಂದಿಗೆ ನಡೆಸಲ್ಪಡುತ್ತಿದೆ.

ದಕ್ಷಿಣದಲ್ಲಿ ಹಾಗೂ ಕರ್ನಾಟಕದಲ್ಲಿ ವಿರಾಜಿಸುವ ಪವಿತ್ರ ಕ್ಷೇತ್ರ ಮೇಲುಕೋಟೆ ಈ ಕ್ಷೇತ್ರ ಕಾವೇರಿ ನದಿಗೆ ಉತ್ತರದಲ್ಲಿ ನಾರಾಯಣಗಿರಿಯ ಮೇಲೆ ವಿರಾಜಿಸುತ್ತಿದೆ. ಈ ಸ್ಥಳವು ಸಮುದ್ರ ಮಟ್ಟಕ್ಕಿಂತ 3 ಸಾವಿರ ಅಡಿಗಳ ಎತ್ತರದ ಬೆಟ್ಟದ ಮೇಲೆ ಇದ್ದು ಒಳ್ಳೆಯ ಪ್ರಕೃತಿ ರಮ್ಯತೆಯಿಂದ ಕೂಡಿದೆ. ಪ್ರತಿನಿತ್ಯವು ಅಧಿಕ ಸಂಖ್ಯೆಯಲ್ಲಿ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತಿದೆ. ಇಲ್ಲಿಯ ಆರಾಧ್ಯ ದೈವ ಶ್ರೀ ಚಲುವನಾರಾಯಣಸ್ವಾಮಿ, ಕೃತಯುಗದಲಿ ದತ್ತಾತ್ರೇಯರಿಂದ ಪೂಜಿಸಲ್ಪಟ್ಟು ವೇದಾದ್ರಿಯೆಂದೂ, ತ್ರೇತಾಯುಗದಲ್ಲಿ ನಾರಾಯಣಾದ್ರಿಯೆಂದು, ದ್ವಾಪರ ಯುಗದಲ್ಲಿ ಶ್ರೀಕೃಷ್ಣಬಲರಾಮರಿಂದ ಪೂಜೆಗೊಂಡು ಯಾದವಾದ್ರಿಯೆಂದು ಕಲಿಯುಗದಲ್ಲಿ ಯತಿಕ್ಷೇತ್ರರಾದ ಆಚಾರ್ಯ ರಾಮಾನುಜರಿಂದ 1000 ವರ್ಷದ ಹಿಂದೆ ಜೀರ್ಣೋದ್ದಾರಗೊಂಡು ಈ ಸ್ಥಳವು ಯತಿಶೈಲವೆಂದೂ ಎಲ್ಲಾ ಯುಗದಲ್ಲಿ ದಕ್ಷಿಣ ಬದರಿ ಕ್ಷೇತ್ರವೆಂದೂ ಪ್ರಸಿದ್ಧಿ ಪಡೆದಿದೆ.

ಗ್ಯಾಲರಿ

ಉಪಯುಕ್ತ ಮಾಹಿತಿ

ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದ ದರ್ಶನ ವೇಳೆ -

  • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.00 ಘಂಟೆಯವರೆಗೆ.
  • ಸಂಜೆ 4.00 ರಿಂದ ಸಂಜೆ 6.00 ಘಂಟೆಯವರವಿಗೆ.
  • ರಾತ್ರಿ 7.00 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ವಿಶೇಷ ದಿನಗಳು [ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜಾದಿನಗಳು ] -

  • ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
  • ಸಂಜೆ 3.30 ರಿಂದ ಸಂಜೆ 6.00 ಘಂಟೆಯವರವಿಗೆ.
  • ಸಂಜೆ 7.00 ರಿಂದ ಸಂಜೆ 8.00 ಘಂಟೆಯವರವಿಗೆ.

ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯದ ದರ್ಶನ ವೇಳೆ (ಬೆಟ್ಟ)-

  • ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ಘಂಟೆಯವರೆಗೆ.
  • ಸಂಜೆ 5.30 ರಿಂದ ರಾತ್ರಿ 8.00 ಘಂಟೆಯವರೆವಿಗೆ.

ಮಾಲೀಕತ್ವ : ಈ ವೈಬ್ ಸೈಟ್ ಮತ್ತು ಅದರ ಪರಿವಿಡಿಯ ಮಾಲೀಕತ್ವವನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು ಹೊಂದಿರುತ್ತಾರೆ.